ಈ ನಾಡಿನಲ್ಲಿ ನಾನು....
ಈ ನಾಡಿನಲ್ಲಿ ನಾನು ಮೂಡಿಬಂದುದೆ ಸೊಗಸು
ಭಾರತವ ಪ್ರೀತಿಸುವ ಭಾಗ್ಯವೆನಗಾಯ್ತು
ಹರಸಿಯೈಸಿರಿತಾಯೆ ಇಲ್ಲದಿರಲೇನು
ಅವಳ ಒಲುಮೆಯ ಸಿರಿಯು ನನ್ನದಾಯ್ತು .... ನನ್ನದಾಯ್ತು
ಎಲ್ಲಿಲ್ಲದಿಹ ಕಂಪು ಅವಳ ಅಲರುಗಳಿಂದ
ನನ್ನದೈ ಸಿರಿಯಾಗಿ ಸೂಸುತಿಹುದು
ವಿಮಲ ಸೌ೦ದರ್ಯದಿಂ ಹೃದಯವನು ತುಂಬಿಸಿ
ಬೆಳದಿಂಗಳಿನಲ್ಲಿ ಬೆಳಗಳಹುದು ....... ಬೆಳಗಳಹುದು
ನನ್ನ ಕಣ್ಣಿಗೆ ಹೊಳೆದ ಮೊಟ್ಟಮೊದಲನೆ ಬೆಳಕು
ಭಾರತದ ಗಗನದಿಂದಿಳಿದು ಬಂತು
ತೆರೆದ ಕಣ್ಣುಗಳೊಮ್ಮೆ ಮುಚ್ಚಿಮುಗಿಯುವ ಕ್ಷಣದಿ
ಅದೇ ಬೆಳಕ ಮುತ್ತಿಡಲು ಪುಣ್ಯವೆನಿತು ..... ಪುಣ್ಯವೆನಿತು
ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡಾನುವಾದ
ಅನುವಾದಕರು : ಗೊತ್ತಿಲ್ಲ
ಈ ನಾಡಿನಲ್ಲಿ ನಾನು ಮೂಡಿಬಂದುದೆ ಸೊಗಸು
ಭಾರತವ ಪ್ರೀತಿಸುವ ಭಾಗ್ಯವೆನಗಾಯ್ತು
ಹರಸಿಯೈಸಿರಿತಾಯೆ ಇಲ್ಲದಿರಲೇನು
ಅವಳ ಒಲುಮೆಯ ಸಿರಿಯು ನನ್ನದಾಯ್ತು .... ನನ್ನದಾಯ್ತು
ಎಲ್ಲಿಲ್ಲದಿಹ ಕಂಪು ಅವಳ ಅಲರುಗಳಿಂದ
ನನ್ನದೈ ಸಿರಿಯಾಗಿ ಸೂಸುತಿಹುದು
ವಿಮಲ ಸೌ೦ದರ್ಯದಿಂ ಹೃದಯವನು ತುಂಬಿಸಿ
ಬೆಳದಿಂಗಳಿನಲ್ಲಿ ಬೆಳಗಳಹುದು ....... ಬೆಳಗಳಹುದು
ನನ್ನ ಕಣ್ಣಿಗೆ ಹೊಳೆದ ಮೊಟ್ಟಮೊದಲನೆ ಬೆಳಕು
ಭಾರತದ ಗಗನದಿಂದಿಳಿದು ಬಂತು
ತೆರೆದ ಕಣ್ಣುಗಳೊಮ್ಮೆ ಮುಚ್ಚಿಮುಗಿಯುವ ಕ್ಷಣದಿ
ಅದೇ ಬೆಳಕ ಮುತ್ತಿಡಲು ಪುಣ್ಯವೆನಿತು ..... ಪುಣ್ಯವೆನಿತು
ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡಾನುವಾದ
ಅನುವಾದಕರು : ಗೊತ್ತಿಲ್ಲ